ಉದ್ಯಾವರ ಮಾಧವ ಆಚಾರ್ಯ ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರು.೨೫-೦೩-೧೯೪೧ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ 'ರಾಸವಿಲಾಸ'ಎಂಬ ಕೃತಿಯನ್ನು ರಚಿಸಿದ್ದರು.ತಾಯಿ ಯು.ಲಲಿತಾಲಕ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾ ಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಅಲ್ಲಿಂದ ಯಕ್ಷಗಾನ,ಕೋಲ,ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು. == ವಿದ್ಯಾಭ್ಯಾಸ == ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ,ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿ ಜೀವನ == ಕುಂದಾಪುರದ ಭಂಡಾರ್ಕಸ್‍ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು,ಕುಂದಾಪುರದ ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. == ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ == ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ,ಸಾಂಸ್ಕೃತಿಕವಾಗಿ ಆಚಾರ್ಯರು ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಧವ ಆಚಾರ್ಯರು ತಮ್ಮನ್ನು ಕಂಡುಕೊಂಡಿದ್ದು ಸಣ್ಣಕಥೆಗಳ ಮೂಲಕ. == ರಂಗಭೂಮಿಯ ಸಾಧನೆ == ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ ಸುಮಾರು ೧೯೫೦-೫೧ರಿಂದ ಇದುವರೆಗೆ ಸಂಯೋಜಿಸಿದ, ನಿರ್ದೇಶಿಸಿದ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದು. == ನೃತ್ಯರೂಪಕಗಳು ಮತ್ತು ನಾಟಕಗಳು == == ವಿಶೇಷ ಸಾಧನೆಗಳು == ಮಂಗಳೂರು ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅಲ್ಲದೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ ಗುಡ್ಡದ ಭೂತ ಧಾರವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ. == ಗೌರವಗಳು == ೧೯೯೭ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ರಂಗಭೂಮಿ ಕಲಾಸಂಸ್ಥೆಯಿಂದ 'ರಂಗವಿಶಾರದ' ಬಿರುದು ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ,ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. == ಉಲ್ಲೇಖಗಳು ==